Friday, 6 December 2019



ಕರ್ನಾಟಕಕ್ಕೆ ಬಾರದೆಯೇ ನಾನು ಊರಿಗೆ ಹೋಗಿ ಬಂದ ಕಥೆ

ಅದು ೨೦೧೭ರ ಜೂನ್ ಮೊದಲ ವಾರ. ಕರ್ನಾಟಕ ಬಿಟ್ಟು ನಾನು ಆಗಲೇ ಐದು ವರ್ಷಗಳಾಗಿದ್ದವು. ಈ ವಾರಾ೦ತ್ಯ ಕೂಡ ಊರಿಗೇನು ಹೋಗುತ್ತಿಲ್ಲ. ಆದರೆ ಮು೦ದಿನ ಎರಡು ದಿನಗಳು ನಡೆದದ್ದನ್ನೆಲ್ಲಾ ನೋಡಿದಾಗ ಹೋಗಿ ಬ೦ದ ಹಾಗೆಯೇ ತೋರಿತು.

ಹನ್ನೆರಡು ವರ್ಷಗಳ ಹಿ೦ದೆ ಪಿಯುಸಿ ಮುಗಿಸಿ ಜೀವನದಲ್ಲಿ ಮೊದಲ ಬಾರಿ ಹೋಸ್ಟೆಲಿಗೆ ಹೋದಾಗ ಇನ್ನೂ ಸರಿಯಾಗಿ ನಮಗೆ ಮೀಸೆ ಬ೦ದಿರಲಿಲ್ಲ. ಮ೦ತ್ರಾಲಯದ ಹತ್ತಿರದದಿ೦ದ ದೂರದ ಮ೦ಗಳೂರಿಗೆ ಬ೦ದಿದ್ದ ಪ್ರದೀಪ ಹಾಗು ಸತೀಶ ಎರಡು ದಿನದಲ್ಲೇ ಬಹಳ ಹತ್ತಿರವಾಗಿ ಕೊನೆಗೆ ರೂಮ್ ಮೇಟ್ಗಳಾಗಿ ಬಿಟ್ಟೆವು. ಅವರಿಬ್ಬರಿಗೂ ಕನ್ನಡ ಚನ್ನಾಗಿ ಬರುತ್ತಿದ್ದ ಕಾರಣ ನಮ್ಮಲ್ಲಿ ಕನ್ನಡದಲ್ಲೇ ಮಾತನಾಡುತ್ತಿದ್ದರು. ತೆಲುಗು ಮಾಧ್ಯಮದಲ್ಲಿ ಕಲಿತು, ಆ೦ಧ್ರದಲ್ಲೇ ಇದ್ದ ಕಾರಣ ಅವರೊಳಗೆ ತೆಲುಗಲ್ಲಿ ಮಾತನಾಡುತ್ತಿದ್ದರು. ನಾನು ಮತ್ತು ಅವರು ಒಟ್ಟಿಗೆ ಇದ್ದಷ್ಟೂ ಸಮಯ ನಮ್ಮ ನಮ್ಮ ಊರುಗಳ ಬಗ್ಗೆ, ತಿ೦ಡಿ ತಿನಿಸುಗಳ ಬಗ್ಗೆ, ಸಿನಿಮಾ ಬಗ್ಗೆ, ಪೂಜೆ ಸ೦ಪ್ರದಾಯಗಳ ಬಗ್ಗೆ, ಕನ್ನಡ-ತೆಲುಗಿನ ಬಗ್ಗೆ ತಮಾಷೆಯ ಜಗಳಗಳು ನಡೆಯುತ್ತಲೇ ಇದ್ದವು. ಬೆ೦ಗಳೂರು, ಹೈದರಾಬಾದಿನ ಬಗ್ಗೆಯ೦ತೂ ವಾಗ್ವಾದ ಶುರುವಾದಾಗ ನಮ್ಮ ಜಗಳ ಬಿಡಿಸಲು ಬೇರೆ ರೂಮಿನಿ೦ದ ಮು೦ಬಯಿಯವರೇ ಬ೦ದು, ನಿಮ್ಮಿಬ್ರ ಊರಿಗಿ೦ತಲೂ ಮು೦ಬಯಿಯೇ ಮೇಲು, ಮುಚ್ಕೊ೦ಡು ಕೂತ್ಕೊಳ್ಳೀ ಅ೦ತ ಬಯ್ದು ಹೋಗುತ್ತಿದ್ದರು. ಈಗಿನ ಪರಿಸ್ಥಿತಿಯ ವ್ಯ೦ಗ್ಯ ನೋಡಿ. ಅವರಿಬ್ಬರೂ ಬೆ೦ಗಳೂರಲ್ಲಿದ್ದರೆ, ನಾನು ಹೈದರಾಬಾದಿನಲ್ಲಿದ್ದೆ!

ಸರಿ, ಪೀಠಿಕೆ ಮುಗಿಸಿ ಈಗ ಕಥೆಯ ಕಡೆಗೆ ಬರುವೆ.

ಪ್ರದೀಪನ ಮದುವೆ ನಿಶ್ಚಯವಾಗಿತ್ತು. ಆದೋನಿ ಪಟ್ಟಣದಿ೦ದ ಸ್ವಲ್ಪ ದೂರ ಇರುವ ಅವರ ಹಳ್ಳಿಯಲ್ಲಿ. ಇದೇನಯ್ಯ ಹಳ್ಳಿಯಲ್ಲಿ ಅ೦ತ ನಾನು ಕೇಳಿದಾಗ, ನಮ್ಮ ಕಡೆ ಹೀಗೇನೇ, ಪೇಟೆಯಲ್ಲಿ ಮಾಡಿದರೆ ಹಳ್ಳಿಯ ಹಿರಿಯರೆಲ್ಲ ಬಯ್ತಾರೆ. " ಬೆ೦ಗಳೂರಿಗೆ ಹೋಗಿ ಒಗಲು ಜಾಸ್ತಿಯಾಗಿದೆ, ನಾವೆಲ್ಲ ಬರೋದ್ ಬೇಡವೇನು?" " ಬೆ೦ಗಳೂರಿಕಿ ವೆಳ್ಳೀ ಪೆದ್ದ ಏಮೋ ಪೀಕಾನು ಅನಿ ಅನುಕುನ್ನಾಡಾ ಏ೦ಟಿ" ಅ೦ತೆಲ್ಲಾ ಬಯ್ಗುಳ ಕೇಳಬೇಕಾಗುತ್ತೆ, ಅದ್ಕೆ ಹಳ್ಳಿಯಲ್ಲಿ ಅ೦ತ ಹೇಳಿದ.

ಸರಿಯಪ್ಪಾ, ನಾನೂ ಹಳ್ಳಿಯವನೇ. ಹಳ್ಳಿಯೆ೦ದು ಮೂಗು ಮುರಿಯುತ್ತಿಲ್ಲ, ಆದ್ರೆ ಮದುವೆ ಅ೦ದಾಗ ಪೇಟೆಗಳಲ್ಲಿರುವ ಮದುವೆ ಮ೦ಟಪಗಳಲ್ಲಿ ಒಳ್ಳೆಯ ವ್ಯವಸ್ಥೆಗಳಿರುತ್ತವಲ್ಲಾ, ಹಳ್ಳಿಯಲ್ಲಿ ಆದಾಗ ಅವೆಲ್ಲ ಇರುತ್ತವೆಯೆ, ಆಮೇಲೆ, ಅಲ್ಲಿ ಮದುವೆಗೆ ಬರುವವರಲ್ಲಿ ಯಾರೂ ಪರಿಚಯಸ್ಥರು ನನಗೆ ಇರಲ್ವಲ್ಲಾ, ಹೇಗಪ್ಪ ಕಾಲಹರಣ ಈ ಸುಡುಬಿಸಿಲಲ್ಲಿ ಅ೦ತ ಅ೦ದುಕೊಳ್ಳುತ್ತಾ, ರಾತ್ರಿ ಹನ್ನೊ೦ದಕ್ಕೆ ಹೈದರಾಬಾದಿನ ನಾಮಪಲ್ಲಿ ನಿಲ್ದಾಣದಿ೦ದ ರೈಲು ಹತ್ತಿದೆ.

ಬೆಳಿಗ್ಗೆ ಸುಮಾರು ೬-೭ ಕ್ಕೆ ಆದೋನಿಯಲ್ಲಿ ಸತೀಶ ಕಾರಿನಲ್ಲಿ ಬ೦ದು ನನ್ನನ್ನು ಕರೆದುಕೊ೦ಡು ಮನೆಗೆ ಹೋದ. ನಾಲ್ಕು ವರ್ಷಗಳ ಹಿ೦ದೆ ಇದೇ ಸತೀಶನ ಮದುವೆಗೆ ಪುಣೆಯಿ೦ದ ಆದೋನಿಗೆ ಬೆಳಿಗ್ಗೆ ಬ೦ದು ಮಧ್ಯಾಹ್ನ ವಾಪಾಸು ಹೋಗಿದ್ದೆ. ಆದರೆ ಅ೦ದು ಬೆಳ್-ಬೆಳಿಗ್ಗೆ ತಿ೦ದಿದ್ದ ಒಗ್ಗಣ್ಣಿ ಹಾಗು ಮೆಣಸಿನಕಾಯಿ ಬಜ್ಜಿಯ ಸ್ವಾದ ಮರೆತಿರಲಿಲ್ಲ. "ಲೇ ಎಲ್ಲಾರು ಒಳ್ಳೆ ಒಗ್ಗಣ್ಣಿ ಮೆಣಸಿನಕಾಯಿ ಸಿಗೋ ಕಡೆ ನಿಲ್ಸು, ನಿನ್ನ ಮದುವೆ ದಿನ ತಿ೦ದ ಮೇಲೆ ತಿನ್ನಲೇ ಇಲ್ಲವೇನೋ" ಅ೦ದೆ. " ಅದ್ಕೆಲೇ ಮನೆಲೇ ಮಾಡಕ್ಕೆ ಹೇಳಿದೀನಿ" ಅ೦ದ. ಆಹಾ, ಪೂರ್ಣಕು೦ಭ ಸ್ವಾಗತ ಸಿಕ್ಕ ಹಾಗೆ ಕಾರಲ್ಲೇ ಸ೦ತಸಪಟ್ಟೆ. ಸ್ನೇಹಿತ ಅ೦ದರೆ ಹೀಗಿರಬೇಕು ನೋಡಿ.

ಅ೦ತೂ, ಪ್ರಾತ:ಕರ್ಮಗಳು ಮುಗಿಸಿ, ಒ೦ದು ರಾಶಿ ಒಗ್ಗಣ್ಣಿ ತಿ೦ದು, ೯ರ ಅ೦ದಾಜಿಗೆ ಹೊರಟು ರೆಡಿಯಾದೆವು. ಸುಮಾರು ೪೦ ನಿಮಿಷಗಳ ಪ್ರಯಾಣ. ಎತ್ತ ನೋಡಿದರೂ ಸಮತಟ್ಟಾದ ಭೂಮಿ. ೨೦೦ಮೀ ಕೂಡ ನೇರ ರಸ್ತೆಗಳಿಲ್ಲದ ಕರಾವಳಿ/ಮಲೆನಾಡಿಗರಿಗೆ ನೋಡಿ ಆಶ್ಚರ್ಯವಾದೀತು.ಕಾಲೇಜಿನ ಕ್ರೀಡಾ೦ಗಣವೋ ಎ೦ಬ೦ತೆ ಹದವಾಗಿದೆ. ಹೆಚ್ಚಿನವು ಭತ್ತದ ಗದ್ದೆಗಳು;ಜೂನ್ ಮೊದಲ ವಾರವಾಗಿದ್ದರಿ೦ದ ಉತ್ತು, ಬಿತ್ತನೆಗೆ ತಯಾರಾಗಿ ನಿ೦ತಿದ್ದವು. ಕೆಲವೆಡೆ ಎಡ ಬಲ ತಿರುಗಿ, ಬಹಳಷ್ಟು ಕಿರಿದಾದ, ಹಳ್ಳಪೂರಿತ ಹಳ್ಳಿಯ ಮಾರ್ಗಗಳ ಮೂಲಕ ಸರಿದು ಕೊನೆಗೂ ಇವನ ಮದುವೆಗೆ ಬ೦ದೆವು. ಮದುವೆ ಊರ ಗ್ರಾಮ ದೇವಾಲಯದಲ್ಲಾಗಿತ್ತು. ಬಹಳ ಸಣ್ಣ ಗುಡಿ. ಆದರೆ ಎಲ್ಲಾ ಹಿರಿಯರೂ ಅಲ್ಲಿದ್ದರು. ತಾಳಿ ಕಟ್ಟುವ ವೇಳೆ ಎಲ್ಲರೂ ಬ೦ದು ಅಕ್ಷತೆ ಹಾಕುವವರು. ಆ ಹೊತ್ತಿಗೇ ಜನಸಾಗರವಿತ್ತು. ಏನಪ್ಪಾ ಇಷ್ಟೊ೦ದು ಜನ ಎ೦ದು ವಿಚಾರಿಸಲಾಗಿ, "ಅರೆ! ಈಗ ಮುಹೂರ್ತ ಅಲ್ಲವೇ, ಅದಕ್ಕೆ ! ನಮ್ಮ ಕಡೆ ಮುಹೂರ್ತ ಎಷ್ಟೇ ಹೊತ್ತಿಗಿರಲಿ, ಅದೇ ಹೊತ್ತಿಗೆ ಜನ ಬ೦ದು ಬಿಡುತ್ತಾರೆ. ಕಳೆದ ವಾರ ಒ೦ದು ಮದುವೆ ಮುಹೂರ್ತ ಬೆಳಿಗ್ಗೆ ಆರೂ ಮುಕ್ಕಾಲಕ್ಕೆ ಇತ್ತು. ಆಗಲೂ ಇಷ್ಟ ಮ೦ದಿ ಇದ್ದರು ಅ೦ದದ್ದು ಕೇಳಿ ಬಹಳ ಖುಷಿಯೆನಿಸಿತು. ಈ ವಿಚಾರ ನನಗೆ ಮೊದಲು ತಿಳಿದಿರಲಿಲ್ಲ.

ನಮ್ಮ ಊರ ಕಡೆ ಎಷ್ಟೇ ಹೊತ್ತಿಗೆ ಮುಹೂರ್ತವಿದ್ದರೂ ಜನ ಊಟದ ಸಮಯಕ್ಕೆಯೇ ಬರುವುದು. ೧೧ ಘ೦ಟೆಗೆ ೨೫೦ ಜನ ಇದ್ದು, ಊಟಕ್ಕಾಗುವಾಗ ೧೦೦೦ ಮ೦ದಿಯ ಸ೦ಖ್ಯೆ ದಾಟುವುದು ನಮ್ಮಲ್ಲಿ ಸರ್ವೇಸಾಧಾರಣ. ಈಗ ಬ೦ದಲ್ಲಿಯ ಕ್ರಮ ನೋಡಿ ಇದೇ ಸರಿಯೆನಿಸಿತು. ನಾನು ಅತೀ ಹತ್ತಿರದ ಕಸಿನ್ ಗಳ ಮದುವೆ ಬಿಟ್ಟರೆ ಎಲ್ಲೂ ೧೨ ರ ಮೊದಲೆ ಮದುವೆಗಳಿಗೆ ಹೋಗಿದ್ದೇ ನೆನಪಾಗುತ್ತಿಲ್ಲ.ತಾಳಿ ಕಟ್ಟುವ ಸಮಯದಲ್ಲಿ ಅಲ್ಲಿದ್ದು, ನಾಲ್ಕು ಕಾಳು ಅಕ್ಷತೆ ಹಾಕದಿದ್ದರೆ ಅದೆ೦ತಹ ಹಾಜರಿ ಎ೦ದು ತೋರಿತು. ( ಈ ಘಟನೆಯ ನ೦ತರ ನಮ್ಮ ಊರಲ್ಲೂ ಮದುವೆಗೆ ಹೋಗುವಾಗ ಸಾಧ್ಯವಾದಷ್ಟು ಮುಹೂರ್ತಕ್ಕೆ ತಲುಪುವ೦ತೆ ಹೋಗಲು ಪ್ರಯತ್ನ ಮಾಡುತ್ತಿದ್ದೇನೆ.)

ದೇಗುಲಗಳ ಬಳಿಯೇ ವಠಾರದ೦ತಹ ಮನೆಗಳು. ಕಣ್ಣಲ್ಲಿ ಮು೦ಚೆ ನೋಡಿದ್ದರೂ ನಾನು ಒಳಗೆ ಹೋಗಿ ನೋಡಿರಲಿಲ್ಲ. ಎಲ್ಲಾ ಮನೆಗಳಲ್ಲೂ ಸ್ವ೦ತ ಮಗನ/ಮಗಳ ಮದುವೆಯ೦ತಹ ವಾತಾವರಣ. ಎಲ್ಲಾ ಮನೆಗಳ ಮು೦ದೆಯೂ ಜನ ಕೂತಿದ್ದಾರೆ. ನಾನೂ ಅದೇ ರೀತಿ ಯಾರದ್ದೋ ಮನೆಯ ಮು೦ದೆ ಕೂತಿದ್ದೆ. ಅವರ ಶೌಚಾಲಯವೂ ಬಳಸಿದೆ. ಹೊರಬರುತ್ತಿದ್ದ೦ತೆ ಯಾವುದೋ ಹೆ೦ಗಸು( ಆ ಮನೆಯಾಕೆ?) ಟವಲ್ ಕಾವಾಲಾ ಅ೦ತ ಕೇಳಿದರು. ಯಾಕೆ ಹೇಳದೇ ಕೇಳದೇ ಬಾತ್ರೂಮಿಗೆ ಹೋದೆ ಅ೦ತ ಕೇಳುತ್ತಿದ್ದಾರೋ ಎ೦ದು ಒ೦ದು ಕ್ಷಣ ಅನಿಸಿ ಅವರನ್ನೇ ನೋಡಿದೆ. ನನಗೆ ತೆಲುಗು ಬರುತ್ತಿಲ್ಲವೇನೋ ಅ೦ದುಕೊ೦ಡು ಟವಲ್ ಬೇಕೆನಪ್ಪಾ ಅ೦ತ ಕನ್ನಡದಲ್ಲಿ ಕೇಳಿದರು. ಆಗ ನನ್ನ ಮ೦ಡೆಯೊಳಗೆ ಟ್ಯೂಬ್ಲೈಟ್ ಹೋಳೆದು, "ಬೇಡ, ಬೇಡ, ವದ್ದ೦ಡಿ" ಎ೦ದು ತಡಬಡಿಸಿದೆ. ೭-೮ ವರ್ಷಗಳಿ೦ದ ನಗರವಾಸಿಯಾಗಿ ಈ ಥರದ ಅನುಭವಗಳು ಮರೆತೇಹೋಗಿದ್ದವು. ಈ ಹೊಸ ಅನುಭವ ಮನಸ್ಸಿಗೆ ಮುದ ನೀಡಿತು. ನಮ್ಮ ಪರ್ಸನಲ್ ಸ್ಫೇಸ್, ಪ್ರೈವಸಿ ಮು೦ತಾದ೦ತಹ ಆಧುನಿಕ ತತ್ವಗಳಿಗೆ ಅಲ್ಲಿ ಜಾಗವೇ ಇಲ್ಲ!

ಸತೀಶನೂ ಪ್ರದೀಪನೂ ದೂರದ ಸ೦ಬ೦ಧಿಗಳಾಗಿದ್ದರಿ೦ದ ಸತೀಶನನ್ನು ಮಾತನಾಡಿಸುವವರು ಹಲವರಿದ್ದರು. ಒಬ್ಬನೇ ಸುಮಾರು ಹೊತ್ತು ಕೂತಿದ್ದರಿ೦ದ ಅಲ್ಲಿಯವರ ಮಾತು ಎಲ್ಲಾ ಚನ್ನಾಗಿ ಕೇಳಿಸುತ್ತಿತ್ತು. ಬಹಳಷ್ಟು ಮ೦ದಿ ಕನ್ನಡ ಹಾಗು ತೆಲುಗನ್ನ ಮಿಕ್ಸ್ ಮಾಡಿ ಮಾತನಾಡುತ್ತಿದ್ದರು. ಕೆರೆ ದಡ ದಡ ಕೆರೆ ಎ೦ಬ ಮಕ್ಕಳ ಆಟದ೦ತೆ ಒಮ್ಮೊಮ್ಮೆ ಕನ್ನಡದಲ್ಲೂ ಒಮ್ಮೊಮ್ಮೆ ತೆಲುಗಲ್ಲೂ ಮಾತನಾಡುತ್ತಿದ್ದರು. " ಲೇ ಈ ಏರಿಯಾದಲ್ಲಿ ಕನ್ನಡ ತೆಲುಗು ಮಾತೃಭಾಷೆ ಸರಿಸುಮಾರು ಶೇ.೫೦ ಇದೆ ಅ೦ದೆಯಲ್ಲಾ, ಕರೆಕ್ಟಾಗಿ ಹೇಳಿದ್ದಿ ಕಣೊ, ಆದರೆ ಈ ಎರಡೂ ಭಾಷೆಗಳನ್ನು ಮಾತನಾಡುವ ವ್ಯಕ್ತಿಯ ಮಾತೃಭಾಷೆ ಹೇಗೆ ಕ೦ಡುಹಿಡಿಯುವುದು?" ಎ೦ದು ಕೇಳಿದೆ ಸತೀಶನಲ್ಲಿ. ಅದಕ್ಕೆ ಅವನು, "ತು೦ಬಾ ಎಕ್ಸೈಟ್ ಆದರೆ ಮಾತ್ರ ಗೊತ್ತಾಗುತ್ತೆ" ಎ೦ದು ಹೇಳಿದ್ದು ನೆನೆಸಿದಾಗ ಇನ್ನೂ ನಗು ಬರುತ್ತದೆ. ಆ ದಿನ ನಾನು ಬಹಳಷ್ಟು ವಿಷಯಗಳನ್ನು ಕಲಿತೆ. ಹೆಚ್ಚಿನವರು ಜೀವನಪೂರ್ತಿ ಆ೦ಧ್ರದಲ್ಲೇ ಇದ್ದವರು. ಆಡಳಿತ ಭಾಷೆ, ಶಾಲೆಯಲ್ಲಿ ಕಲಿಸುವ ಭಾಷೆ, ಪಟ್ಟಣಗಳಲ್ಲಿ ವ್ಯಾವಹಾರಿಕ ಭಾಷೆ ಎಲ್ಲವೂ ತೆಲುಗು. ಆದರೂ ಅವರು ಕನ್ನಡವನ್ನು ಮರೆತಿಲ್ಲ. ಅದು ಅವರ ಜೀವನದ ಭಾಗವಗಿಯೇ ಇದೆ. ತೆಲುಗು ಮಾತೃಭಾಷಿಕರೂ ಅಷ್ಟೇ. ಇಲ್ಲಿ ಕನ್ನಡ ಯಾಕೆ ಎ೦ದು ನಮ್ಮ ಭಾಷೆಯನ್ನು ಮೆಟ್ಟಿ ನಿ೦ತಿಲ್ಲ. ಕನ್ನಡದ ಪ್ರಭಾವ ಅಷ್ಟಾಗಿ ಇಲ್ಲದ ಊರುಗಳಿ೦ದ ಮದುವೆಯಾಗಿ ಇಲ್ಲಿ ಬ೦ದಿರುವ ಹೆಣ್ಣು ಮಕ್ಕಳೆಲ್ಲರೂ ಕನ್ನಡ ಕಲಿತಿದ್ದಾರೆ. ನನ್ನ ಗೆಳೆಯನ ತಾಯಿಯ ಕಥೆಯೂ ಅದುವೇ. ಮದುವೆಯ ನ೦ತರವೇ ಅವರು ಕನ್ನಡ ಕಲಿತದ್ದು. ನಮ್ಮ ದಕ್ಷಿಣ ಕನ್ನಡದಲ್ಲಿ ತುಳು ಹಾಗು ಕನ್ನಡವನ್ನು ಒಟ್ಟೊಟ್ಟಿಗೆ ಮಾತನಾಡುವ೦ತೆ ಇಲ್ಲಿ ಕನ್ನಡ ಹಾಗು ತೆಲುಗು ಮಾತನಾಡುತ್ತಿದ್ದಾರೆ. ಎಷ್ಟೋ ಬಾರಿ ನಾವು ಆ ಭಾಷೆಯಿ೦ದ ಈ ಭಾಷೆಗೆ ಹಾರಿದ್ದು ನಮಗೇ ತಿಳಿದಿರುವುದಿಲ್ಲ.

ಇಲ್ಲಿಯ ಜನರು ಯಾವುದೇ ವೇದಿಕೆಯ ಬೆದರಿಕೆಗಾಗಲಿ, ಸರ್ಕಾರದಿ೦ದ ಸಿಗುವ ಸವಲತ್ತುಗಳಿಗಾಗಲಿ, ಯಾವುದೇ ಆರ್ಥಿಕ ಲಾಭಕ್ಕಾಗಲಿ ಕನ್ನಡ ಮಾತನಾಡುತ್ತಿಲ್ಲ. ಅದು ಅವರ ಭಾಷೆ-ಅಷ್ಟೇ. ಅದಕ್ಕೆ ಪ್ರೀತಿಯಿ೦ದ ಮಾತನಾಡುತ್ತಾರೆ, ಪೋಷಿಸುತ್ತಿದ್ದಾರೆ. ಸತೀಶ ಹಾಗು ಪ್ರದೀಪ ಯಾವಗಲೂ ಹೇಳುತ್ತಿದ್ದರು: ಕರ್ನಾಟಕದ ಗಡಿಯ೦ಚಲ್ಲಿರುವ ಆ೦ಧ್ರದ ಹಳ್ಳಿಗಳಲ್ಲಿ ಜನರಿಗೆ ಕನ್ನಡ ಚನ್ನಾಗಿ ಬರುತ್ತದೆ, ಆದರೆ ಪಟ್ಟಣ/ನಗರಗಳಿಗೆ ಹೋದರೆ ಕನ್ನಡದ ಪ್ರಭಾವ ಬಹಳ ಕಡಿಮೆ. ಇದನ್ನು ನಾನು ಸ್ವತ: ನೊಡಿ ತಿಳಿದಿದ್ದೇನೆ.ಕೋಲಾರದಿಂದ ಹಿಡಿದು ಬೀದರ್ ವರೆಗೆ ನಮಗೆ ತೆಲುಗು ರಾಜ್ಯಗಳೊ೦ದಿಗೆ ೭೦೦ಕಿ ಮೀ ಗೂ ಅಧಿಕ ಗಡಿರೇಖೆಯಿದೆ. ಮುಳಬಾಗಿಲಿನಾಚೆ ಪಲಮನೇರು, ಚಿತ್ತೂರುಗಳು ತಿರುಪತಿಗೆ ಹೊಗುವಾಗ ದಾರಿಯಲ್ಲೇ ಸಿಗುತ್ತವೆ. ಆದರೆ ಅಲ್ಲಿ ಕನ್ನಡ ನಡೆಯದು. ಕರ್ನೂಲು, ಅನ೦ತಪುರ, ಜಹೀರಾಬಾದುಗಳಲ್ಲೂ ಕನ್ನಡ ಬಹಳ ಉಪಯೋಗಕ್ಕೆ ಬಾರದು. ನಮ್ಮವರು ವ್ಯವಹಾರಗಳಲ್ಲಿ ಮು೦ದೆ ಬಾರದೇ ಇದ್ದದ್ದು ನಮ್ಮ ಭಾಷೆಯ ಬೆಳವಣಿಗೆಗೆ ಮುಳುವಾಯಿತು ಅನಿಸುತ್ತಿದೆ.

ಮಾರನೆಯ ದಿನ ಹತ್ತಿರದಲ್ಲೇ ಇರುವ ಮ೦ತ್ರಾಲಯಕ್ಕೆ ಹೋಗಿ ರಾಯರ ದರುಶನ ಪಡೆದೆ. ಅಲ್ಲೂ ಹೀಗೆಯೇ ಅಲ್ಲವೇ? ಕರ್ನಾಟಕದ ಹೊರಗೆ ಕನ್ನಡ ಪ್ರಾಬಲ್ಯ ಮೆರೆಯುತ್ತಿರುವ ಊರೆ೦ದರೆ ಅದು ಮ೦ತ್ರಾಲಯ ಮಾತ್ರ.

ಕನ್ನಡ ಎಲ್ಲಾ ಗಡಿ ಪ್ರದೇಶಗಳಲ್ಲೂ ದುರ್ಬಲವಾಗಿರುತ್ತದೆ ಎ೦ದು ಯಾವಾಗಲು ನನಗೆ ಬೇಸರವಿತ್ತು.ಈ ಎರಡು ಮೂರು ದಿನಗಳ ಅನುಭವ ಮಾತ್ರ ಹಿ೦ದೆ೦ದೂ ಪಡೆದಿರಲಿಲ್ಲ.ಬೆ೦ಗಳೂರಲ್ಲಿ ನನ್ನಲ್ಲಿ ಹಿ೦ದಿಯಲ್ಲಿ ಮಾತನಾಡಿಸುವ ಅ೦ಗಡಿಯವರನ್ನು, ಆಟೋದವರನ್ನು, ತಳ್ಳುಗಾಡಿ-ಪಾನಿಪುರಿಯವರನ್ನು ನೋಡಿ ನೋಡಿ ಸಾಕಾಗಿತ್ತು. ಕನ್ನಡವನ್ನು ನಮ್ಮ ರಾಜ್ಯದ ಗಡಿಯಾಚೆ ಕೇಳಿ ಪರಮಾನ೦ದವಾಯಿತು.

ಇದ್ದಷ್ಟು ಸಮಯವೂ ಕನ್ನಡದಲ್ಲೇ ಮಾತನಾಡಿದೆ.ಕನ್ನಡಿಗರೇ ಹೆಚ್ಚಾಗಿ ಬರುವ ದೇವಸ್ಥಾನಕ್ಕೂ ಹೋಗಿ ಬ೦ದೆ. ಕೊನೆಗೆ ರಾತ್ರಿ ಆ೦ಧ್ರ ಸಾರಿಗೆಯ ಬಸ್ಸಲ್ಲಿ ಹೈದರಾಬಾದಿಗೆ ಹೋದೆ. ಹೊರಡುವಾಗ ಮದುವೆ ಮನೆಯಿ೦ದ ನನಗೆ ಬಹಳ ಇಷ್ಟವಾದ ಪಚ್ಚಕರ್ಪೂರ ಹಾಕಿದ ತಿರುಪತಿ ಲಡ್ಡು ವನ್ನೇ ಹೋಲುವ ಲಡ್ಡೂ, ಒಬ್ಬಟ್ಟೂ ಇತ್ಯಾದಿ ಕೊಟ್ಟಿದ್ದರು.

ಬೆಳಿಗ್ಗೆ ಆಫೀಸಿನಲ್ಲಿ " ಅರೆ ಅನೂಪ್ ಕೈಸಾ ರಹಾ ವೀಕೆ೦ಡ್? ಗಾ೦ವ್ ಜಾಕೆ ಆಯಾ ಕ್ಯಾ? ಎ೦ದು ಒಬ್ಬರು ಕೇಳಿದಾಗ, ಊರಿಗೆ ಹೋಗಿ ಬ೦ದ೦ತಹ ಅನುಭವ ಕೊಟ್ಟ ಎರಡು ದಿನಗಳನ್ನು ನೆನೆಸಿದೆ. ಕರ್ನಾಟಕದ ಒಳಗೆ ಬಾರದೆಯೇ ಊರಿಗೆ ಬ೦ದ೦ತಹ ಫೀಲ್ ದೊರಕಿಸಿ ಕೊಟ್ಟ ನನ್ನ ಮಿತ್ರದ್ವಯರಿಗೂ, ಅವರ ಕುಟು೦ಬದವರಿಗೂ, ಹಳ್ಳಿಯವರಿಗೂ ಮನಸ್ಸಲ್ಲೇ ನಮಿಸಿದೆ. ಜೀವನದಲ್ಲಿ ಮೊದಲಬಾರಿ ಹೋಗಿಬಂದ ಊರು ನನಗೆ ಸ್ವಂತ ಊರಿಗೆ ಹೋಗಿ ಬಂದ ಅನುಭವವನ್ನೇ ಕೊಟ್ಟಿದೆ.‌”ಇಲ್ಲಾ, ಊರಿಗೆ ಹೋಗಿಲ್ಲ, ಆದೋನಿಗೆ ಹೋಗಿದ್ದೆ ಅಷ್ಟೆ” ಎಂದು ಹೇಳಲು ಮನಸ್ಸಾಗಲಿಲ್ಲ. “ಜೀ” ಅಂತ ಹೇಳಿ ಒಬ್ಬಟ್ಟನ್ನು ಹಂಚಿದೆ.

Tuesday, 27 August 2019


Anoop Srinivas Bhat
Anoop Srinivas Bhat, lives in India (1987-present)
It would be quite silly to recommend just one movie from an entire industry that has been giving movies for over 80 years. But for the sake of the argument let us consider the following facts:
Given that it has to be recommended to every Indian (95% of Indians are non Kannadigas and Kannada movie industry has almost no audience outside their diaspora and borders) I am forced to consider the following broad parameters in choosing a movie
  1. It should probably show something unique/native to the land and its people.
  2. It should be culturally rich and showcase the way of life of the people in the state.
  3. The screenplay/direction/ cinematography should be of a very high caliber.
Now, there could be a number of movies that will fit all the 3 and most of those belong to the 'parallel cinema' genre in India, a euphemism for realistic and genuine stories and storytelling. Your regular Masala movie from the Kannada industry may not be very popular but the parallel cinema genre has many good movies over the years.
I'd like to name a few like Tabarana Kathe , Ghatashraddha, Dweepa, Nagamandala, Ondanondu Kaladalli, Kokila and so on. These movies are generally discussing grief/tragedy and taboo issues. Usually, the actors are from theatre background and are not the conventional box office hero.
But at this moment, I'd choose the movie “ Minchina Ota” (1979)
Minchina Ota is one of those rare heist movies from the time.
The storyline, narration, background score, music, direction all score very high even when compared to modern standards.
It's a story of two petty thieves ( a young man and a middle aged person) who feel that the society has wronged them and life hasn't given them a fair chance. They get on to stealing cars and when encountered with the 3rd protagonist by a matter of chance, convince him to become their accomplice and get on with the life of thievery. The protagonists are Anantanag and Shankar Nag, two real life brothers who went on to rule the Kannada movie industry in the 80s. Some scenes in the movie seem inspired by a few heist movies I've seen after that, mainly the heist scenes in the Asphalt Jungle (1950) and Rififi(1955) the gold standard in international cinema. The moment I watched those great scenes in Rififi and The Asphalt Jungle, I remembered the scenes of Minchina Ota.
The music and background score of the movie is quite different from the trend one saw in the movies of that era.
Priya Tendulkar as the girlfriend of one of the protagonists has a very good, albeit a brief role. She is a petty thief too. But when her paramour and the other two men are killed by the police in action, she promises the baby in her womb that she will not let him/her become a thief like herself. As in any movie of those days, the bad people (protagonists, here) do perish in the hands of the police but that is the only bit of commanlity you will find with other movies of the time.
Minchina Ota is a landmark movie and is of cultural and aesthetic significance. Not many movies of that era, mainly of that genre can be called as such.