ವಾಟ್ಸಾಪ್ ನಿನಗೆ ಹ್ಯಾಟ್ಸಾಫ್.
ಇವಕ್ಕೆ ಈಗ ಈಗ ಕೋಪ ಜಾಸ್ತಿ ಆಯಿದು. ಊರಿನ ವಿಷಯಂಗಳ ಎಲ್ಲ ತಲೆಗೆ ಹಚ್ಚಿಗೊಂಬದು, ಒಟ್ರಾಸಿ ಬೆಚ್ಚ ಮಾಡಿಗೊಂಬದು.
ಮಾಲಿಂಗಣ್ಣನ ಮನೇಲಿ ಕರವಾಗ ದನ ಮೆಟ್ಟಿ ಬಾಲ್ದಿಯ ಕೌಂಚಿ ಹಾಕಿದ್ದಕ್ಕೂ, ಸೇಸ ನಾಯ್ಕನ ಅಳಿಯ ಸಮಾ ಕುಡಿತ್ತನಡ ಹೇಳ್ತದಕ್ಕೂ, ಫಕ್ರು ಬ್ಯಾರಿಯ ಅಂಗಡಿಲಿ ಹೆಗ್ಗಣದ ಕಾಟ ಇಪ್ಪದರನ್ನೂ ತಲೆಗೆ ಹಚ್ಚಿಗೊಂಡು ಸರೀ ಉಣ್ಣದ್ದೆ ಕೂಬದು….
“ಇದಾ ಸುಮಂಗಲೇ ,ನೀ ಹೀಂಗೆ ಮಾಡ್ವದು ಎನಗೆ ಇಷ್ಟವೇ ಇಲ್ಲೆ ” ಹೇಳಿ ಮೊನ್ನೆ ಬೈದಪ್ಪಗ ಎನಗೆ ರಜ್ಜ ಹೆದರಿಕೆ ಆಯಿದು.
ಎಂತದಕ್ಕೆ ಹೀಂಗೆ ಮಾಡ್ತವಪ್ಪಾ ಹೇಳಿ ತಲೆಗೆ ಕೈ ಮಡುಗಿ ಕೂದಿಪ್ಪಗ ಫ್ಲೇಷ್ ಆತು.
ದೀಪನ ಕೊಟ್ಟು ಐದು ವರ್ಷ ಆತು. ಅದರ ಗೆಂಡಂಗೆ ಬೆಂಗಳೂರಿಲೇ ಉದ್ಯೋಗ. ಅದರ ಅತ್ಯೋರೂ, ಮಾವನೋರುದೆ ಊರಿಲಿಪ್ಪ ಜಾಗೆ ಮಾರಿ ಬೆಂಗಳೂರು ಸೇರಿದ್ದವು. ಒಳ್ಳೆ ಕೊಳಕ್ಕೆ ಗದ್ದೆಯೂ, ಹತ್ತೆಕ್ರೆ ಅಡಕ್ಕೆ ತೋಟವೂ ಇದ್ದತ್ತು. ಮಕ್ಕೊಗೆ ಊರು ಬೇಡಡ.
ಎಂತಾ ಅವಸ್ಥೆಯೋ!
ಇನ್ನು ದಿವ್ಯನುದೆ ಬೆಂಗಳೂರಿಲೇ ಇಪ್ಪದು ಈಗ. ಎರಡು ವರ್ಷದ ಹತ್ರ ಆತು ಕಂಪನಿ ಲಿ ಮಣ್ಣು ಹೊರ್ತದು.
ಏವ ಮಾಣಿಯ ತೋರಿಸಿರೂ ಬೇಡ ಬೇಡ ಹೇಳ್ತು.
ಮಹೇಶ ಈಗ ಫೈನಲ್ ಯರ್ ಲಿ ಇಪ್ಪದು. ವಿಪ್ರೋ ಲಿ ಜೋಬು ನಿಗಂಟಾಯ್ದು.
ಮಕ್ಕೊ ಎಲ್ಲಾ ದೂರ ಹೋವ್ತವನ್ನೇ ಹೇಳಿ ಒಬ್ಬನೇ ಕೊರಗುತ್ತವು. “ಇದಾ, ಎಂತಾತು ಹೇಳೀಳಿ “ಹೇಳಿ ಬಡ್ಕೊಂಡರೂ ಎಂತೂ ಹೇಳ್ತವಿಲ್ಲೆ. ಆನು ಎಂತ ಮಾಡಿ ಸಾವದು ಗೊಂತಾವುತ್ತಿಲ್ಲೆ.
ಈ ದಿವ್ಯಂಗೂ, ಮಹೇಶಂಗೂ ಹೇಳಿರೆ ಭಾಷೆ ಇಲ್ಲೆ. ಎಷ್ಟು ಹೊತ್ತು ನೋಡಿರೂ ಫೋನಿಲಿ ಗುರುಟಿಯೋಂಡು ಇಪ್ಪದು.
ಮನೆಗೆ ಬಂದಿಪ್ಪಗ ಆದರೂ ಅದರ ಕರೇಲಿ ಮಡುಗಿ ಹೇಳಿರೆ ಇಲ್ಲೆ. ಆರತ್ರೆ ಮೆಸೇಜು, ಫೋನು ಹೇಳಿರೆ ಮಹೇಶನತ್ತರೆ, ದಿವ್ಯಕ್ಕನತ್ತರೆ ಹೇಳಿ ಹೇಳ್ತವು.
ಒಬ್ಬಂಗೊಬ್ಬನ ನೋಡಿದರೆ ಕಾದುವವಕ್ಕೆ ಫೋನಿಲಿ ಎಂತಪ್ಪಾ ಚೆಂಙಾಯಿ ಹೇಳಿ ಇವಕ್ಕೆ ಸಂಶಯ.
ಲವ್ವು ಮಣ್ಣ ಇದ್ದೋ ಹೇಳಿ ಹೆದರಿ ಹೆದರಿ ಬಿ ಪಿ, ಶುಗರ್ ಕಂಟ್ರೋಲ್ ಗೆ ಬತ್ತಿಲ್ಲೆ.
ಅಲ್ಲಾ, ದಿವ್ಯ ಆ ಕಲ್ಲುರಾಯರ ಮಗಳಿಂಗೆ ಕೊಟ್ಟ ನಿನ್ನ ನೋಟ್ ಪುಸ್ತಕ ತಾ, ತಮ್ಮಂಗಾತು ಹೇಳಿರೆ, ತತ್ತಿಲ್ಲೆ. ಹೆಳೆ ಹೇಳ್ತು಼. ಈ ಆಸಾಮಿಯತ್ರೆ ಅಕ್ಕನ ಪುತ್ತೂರಿಂಗೆ ಕರಕ್ಕೋಂಡು ಹೋಗಿ ಬಾ ಹೇಳಿರೆ ಕೇಳ, ಇವ್ವು ಇಡೀ ದಿನ ಅತ್ಲಾಗಿತ್ಲಾಗಿ ಮೆಸೇಜ್ ಮಾಡುವುದು ಅಪ್ಪೋ ಹೇಳಿ ಎನ್ನತ್ರೆ ಕೇಳಿ ಎನ್ನ ತಲೆಯೂ ಹಾಳು ಮಾಡಿದವು.
ಇನ್ನೊಂದರಿ ಬಂದಿಪ್ಪಗ ಇವರ ಇಬ್ರ ಫೋನಿನ ಬಲುಗಿ ತೋಡಿಂಗೆ ಇಡುಕ್ಕುತ್ತೆ ಹೇಳಿ ಇವ್ವು ಮೊನ್ನೆ ಚೌತಿ ಸಮಯಲ್ಲಿ ಕಿರುಚಾಡಿದವು.
ನಮ್ಮ ದಿವ್ಯಂಗೆ ಕಡೆಂಗೋಡ್ಲು ಶಂಕರಣ್ಣ ನ ಮಗ ಅನೀಶನ ಮೇಲೆ ಮನಸ್ಸಾಯಿದಡ. ಮಾಣಿ ಭಾರೀ ಉಶಾರಿದ್ದ, ಇದರ ಮೇನೇಜರಡ.
ಈ ವಾಟ್ಸಾಪ್ ಎನ್ನ ಹಳ್ಳ ತೋಡಿತ್ತು ಹೇಳಿ ಎಂತೆಂತೆಲ್ಲಾ ಬೇಡದ್ದು ಹೇಳಿಗೊಂಡು ತಲೆ ಚಚ್ಚಲೆ ಇವ್ವು ಹೆರಟವು. ಆನು ಕೈಲಿದ್ದ ತಂಬ್ಳಿ ಪಾತ್ರ ಕೆಳ ಹಾಕಿ, ಇವರತ್ರೆ ಓಡಿ ಸಮಾಧಾನ ಮಾಡಿದೆ.
ಮಾಣಿಗೆ ಒಂದೂವರೆ ಲಕ್ಷ ಸಂಬಳ ಇದ್ದು, ಬೆಂಗಳೂರಿನ ಬೆಳಿಗೆದ್ದೆಲಿ ಸ್ವಂತ ಫ್ಲೇಟು ಇದ್ದಡ, ಊರಿಲಿ ೫೦ಖಂಡಿಯ ತೋಟ ಇವನ ಪಾಲಿಂಗೆ ಬತ್ತಡ ಹೇಳಿ ಎಲ್ಲಾ ಹೇಳಿಯಪ್ಪಗ ರಜ್ಜ ಸಮಾಧಾನ ಆತು ಇವಕ್ಕೆ.
ನಾವು ಜಾತಕ ಹೊಂದುತ್ತೋ ಹೇಳಿ ಹೆರಡುತ್ತಿದ್ದರೆ ಈ ಶಂಕರಣ್ಣನವು ಮೂಸಿಯೂ ನೋಡುತ್ತಿತ್ತವಿಲ್ಲೆ , ಈಗ ಅವ್ವೇ ಕೂಸು ಕೊಡ್ತೀರಾ ಹೇಳಿ ಕೇಳಿದ್ದರಲ್ಲಿ ಇವಕ್ಕೆ ಭಯಂಕರ ಕೊಶಿ ಆತು.
ದಿವ್ಯ ನ ಹತ್ತರೆ ದಿನುಗೊಳಿ ತಪ್ಪಾತು ಕೈ ನೆಗ್ಗಿದ್ದು ಹೇಳಿ ಕೊಂಡಾಟ ಮಾಡಿದವು. ಅಪ್ಪನ ಪುಸುಲಾಯಿಸಲೆ ಹೇಳಿ ಅದು ತೆಕ್ಕೊಂಡು ಬಂದ ೧೦,೦೦೦ದ ಫೋನಿಂಗೆ ಇವರ ಹಳೆ ಸಿಮ್ಮಿನ ಅಡಕತ್ತರಿಲಿ ತುಂಡು ಮಾಡ್ಸಿ ಹಾಕಿದವು.
ವಾಟ್ಸಾಪ್ ಲಿ ನಮ್ಮ ಪೈಕಿ ಯ ಗುಂಪಿಲಿ ಈ ಮಕ್ಕೊ ಅಂಬಗಂಬಗ ಎಂತಾರು ಚೆರೆಪೆರೆ ಮಾಡಿ ಉಪದ್ರ ಆವುತ್ತು ಹೇಳಿ ಇವರ ವಾಟ್ಸಾಪ್ ಪುರಾಣ ಮತ್ತೆ ಶುರುವಾತು.
ಬಲುಗ್ಗಿ ಇಡ್ಕೆಕು ಹೇಳಿ ವಾರಕ್ಕೆ ನಾಕು ಸರ್ತಿ ಹೇಳ್ತವು.
ಹೀಂಗೆ ಇಪ್ಪಗ ನಮ್ಮ ದಿವ್ಯ ನ ಮದುವೆ ಬಗ್ಗೆ ಅಂತೆಕಂತೆಗೊ ಶುರುವಾತು.
ಪೈಕಿಯವಕ್ಕೆ ಹೇಳದ್ದೆ ಕಳಿಯ ಹೇಳುವಲ್ಲಿಗೆ ಎತ್ತಿತ್ತು಼.
ಇವಕ್ಕೆ ಎಂತ ಮಾಡುವದು ಹೇಳಿ ಮಂಡೆಬೆಚ್ಚ. ಅದು ಆರು ಜಾತಕ ಪೋಸ್ಟ್ ಮಾಡಿದ್ದು, ಕೂಸು ನೋಡಲೆ ಬಂದಿಪ್ಪಗ ಗೆಣಂಗಿನ ಪೋಡಿಯೋ, ದೀಗುಜ್ಜೆದೋ ಹೇಳಿ ಕೇಳುಗನ್ನೆಪ್ಪಾ ಹೇಳಿ ಪರಂಚಿದವು.
ಅಷ್ಟಪ್ಪಗ ಕುಂಯ್ಯ್ ಹೇಳಿ ವಾಟ್ಸಾಪ್ ಮೆಸೇಜು ಬಂದದು ನೋಡಿ ಒಂದು ತೆಲಿಕ್ಕೆ ಬಂತು.
ಹೀಂಗೆ ಹೀಂಗೆ ಹೇಳಿ ಅನೀಶನ ಬಗ್ಗೆ, ಶಂಕರಣ್ಣನವರ ಬಗ್ಗೆ ಮಹೇಶನತ್ತರೆ ಟೈಪು ಮಾಡಿಸಿ ಎಲ್ಲೋರಿಂಗೂ ಕಳುಸಿದವು.
ಅಜ್ಜನ ಮನೆ ಗುಂಪು, ಅಪ್ಪಚ್ಚಿ ಮಕ್ಕೊಗೆ, ಕಡೇಂಗೆ ಎನ್ನ ಮನೆಯವಕ್ಕೂ ಕಳುಹಿಸಿ , ಸಮಾಧಾನಲ್ಲಿ ಎರಡು ಸೌಟು ಹೆಚ್ಚು ಅಶನವೂ.ಉಂಡು ಬಚ್ಚಿರೆ ಹಾಕಿದವು.
ಇದಾಗಿ ಎರಡು ತಿಂಗಳಿಂದ ಯಾವ ಬೆಚ್ಚವೂ ಇಲ್ಲೆ.
ತೋಟಕ್ಕೆ ಹೋಪಗಳೂ ವಾಟ್ಸಾಪ್ ಒತ್ತುತ್ತವು.
ಭಟ್ಟಕ್ಕೊಗೆ ಬಪ್ಪ ತಿಂಗಳ ಬದ್ಧದ ದಿನ ನೆಂಪುಸಿಯೋಂಡು,
ಈ ಅನೀಶ ಯಾವುದೋ ಪುರ್ಬುವಿನ ಹೆಸರಿನ ಅಂಗಡಿಲಿ
ಬಟ್ಟೆ ತೆಗೆದ ಫೊಟೋ, ದೀಪ ನ ೩ ವರ್ಷದ ಮಗಳ ಬಾತುಕೋಳಿ ಮೋರೆಯ ನೋಡಿಗೊಂಡು ಒಬ್ಬನೇ ನೆಗೆ ಮಾಡಿ ಕೂಬದು.
ಎಷ್ಟು ದನುಗೊಳಿರೂ ಕೇಳ. ಇನ್ನು ಮಂಟಪಲ್ಲಿ ಫೋನ್ ನೋಡಿ ಗೊಂಡು ಕೂರದ್ದರೆ ಸಾಕು. ಬಲುಗಿ ಇಡುಕುವ ಹೇಳಿ ಕಾಣ್ತು.
ಇವರೊಟ್ಟಿಂಗೆ ಸಾಕಾತಪ್ಪ…….
ಅನೂಪ°

No comments:
Post a Comment